ಕೇರಳದಲ್ಲಿ 13 ಮಂದಿಗೆ ಕೂಡ ಕೋವಿಡ್ 19; ಕೋಟಯಂ ಮತ್ತು ಇಡುಕ್ಕಿ ರೆಡ್ ಜೋನ್‌ನಲ್ಲಿ

52

ಕೇರಳದಲ್ಲಿ 13 ಜನರಿಗೆ ಕೂಡ ಕೋವಿಡ್ 19 ದೃಡಪಡಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಕೋಟಯಂನಲ್ಲಿ ಆರು,ಇಡುಕ್ಕಿಯಲ್ಲಿ ನಾಲ್ಕು,ಪಾಲಕ್ಕಾಡ್, ಮಲಪ್ಪುರಂ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ತಲಾ ಒಂದರಂತೆ ರೋಗ ದೃಡಪಡಿಸಿರುವುದು. ಅವರಲ್ಲಿ ಐದು ಮಂದಿ ತಮಿಳುನಾಡಿನಿಂದ ಬಂದವರು. ಒಬ್ಬರು ವಿದೇಶದಿಂದ ಬಂದವರು. ಒಬ್ಬರು ಹೇಗೆ ಸೋಂಕಿಗೆ ಒಳಗಾದರು ಎಂಬುದು ಸ್ಪಷ್ಟವಾಗಿಲ್ಲ.

ರಾಜ್ಯದಲ್ಲಿ ಕೋಟಯಂ ಮತ್ತು ಇಡುಕ್ಕಿ ಜಿಲ್ಲೆಗಳನ್ನೂ ಕೆಂಪು ವಲಯದಲ್ಲಿ ಒಳಪಡಿಸಲಾಯಿತು. ರಾಜ್ಯದ ಹಾಟ್ ಸ್ಪಾಟ್‌ಗಳಲ್ಲೂ ಬದಲಾವಣೆಗಳಾಗಿವೆ.ಇಡುಕ್ಕಿ ಜಿಲ್ಲೆಯ ವಂಡನ್‌ಮೇಡು, ಇರಟ್ಟಯಾರ್, ಕೊಟ್ಟಾಯಂನ ಐಮನಂ, ವೆಲ್ಲೂರು, ಆಯರಕುನ್ನಂ ಮತ್ತು ಥಲಯೋಲಪರಂಬು ಮುಂತಾದವುಗಳನ್ನು ಹಾಟ್‌ಸ್ಪಾಟ್‌ನಲ್ಲಿ ಒಳಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಸೋಮವಾರ 13 ಜನರು ಗುಣಮುಖರಾಗಿದ್ದಾರೆ. ಕಣ್ಣೂರಿನಲ್ಲಿ ಆರು, ಕೋಳಿಕೋಡ್‌ನಲ್ಲಿ ನಾಲ್ಕು,ತಿರುವನಂತಪುರಂ, ಎರ್ನಾಕುಲಂ ಮತ್ತು ಮಲಪ್ಪುರಂನಲ್ಲಿ ತಲಾ ಒಬ್ಬೊಬ್ಬರು ಗುಣಮುಖರಾದವರು. ಪ್ರಸ್ತುತ 123 ಜನರು ಚಿಕಿತ್ಸೆಯಲ್ಲಿದ್ದಾರೆ. 20,301 ಜನರು ನಿರೀಕ್ಷಣದಲ್ಲಿದ್ದಾರೆ. ಈ ಪೈಕಿ 19,812 ಜನರು ಮನೆಗಳಲ್ಲಿ ಮತ್ತು 489 ಜನರು ಆಸ್ಪತ್ರೆಗಳಲ್ಲಿ ಇರುವರು. ಸೋಮವಾರ 104 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 23271 ಮಾದರಿಗಳನ್ನು ಪರೀಕ್ಷಿಸಿದರಲ್ಲಿ 22537 ಮಾದರಿಗಳು ನಕಾರಾತ್ಮಕವಾಗಿವೆ. ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು ಮತ್ತು ಸಾಮಾಜಿಕ ಸಂಪರ್ಕದಲ್ಲಿ ಹೆಚ್ಚಾಗಿ ತೊಡಗಿರುವವರ 875 ಮಾದರಿಗಳನ್ನು ಪರೀಕ್ಷಿಸಿದರಲ್ಲಿ, ಫಲಿತಾಂಶಗಳು ಲಭ್ಯವಾದ ಒಟ್ಟು 611 ಋಣಾತ್ಮಕವಾಗಿವೆ. ಕೋವಿಡ್ ಪರೀಕ್ಷೆಗಾಗಿ ಕೊನೆಯ ದಿನದಲ್ಲಿ ಮಾತ್ರ ಒಟ್ಟು 3056 ಮಾದರಿಗಳನ್ನು ಕಳುಹಿಸಲಾಗಿದೆ. ಪ್ರಸ್ತುತ ತಿರುವನಂತಪುರಂ, ಆಲಪ್ಪುಳ, ತ್ರಿಶೂರ್ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಯಾವುದೇ ಕೋವಿಡ್ ಪ್ರಕರಣಗಳಿಲ್ಲ. ಕೇರಳದಲ್ಲಿ ಪ್ರಸ್ತುತ ಯಾವುದೇ ಸಾಮಾಜಿಕವ್ಯಾಪನ ಉಂಟಾಗಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಇತರ ರಾಜ್ಯಗಳಲ್ಲಿ ಸಿಕ್ಕಿಕೊಂಡಿರುವ ಮಲಯಾಳಿಗಳನ್ನು ಮರಳಿಸಲಾಗುವುದು; ನೋಂದಣಿ ಬುಧವಾರದಿಂದ ಇತರ ರಾಜ್ಯಗಳಲ್ಲಿ ಸಿಕ್ಕಿಬಿದ್ದ ಮಲಯಾಳಿಗಳನ್ನು ವಾಪಸ್ ಊರಿಗೆ ಮರಳಿಸಲಾಗುವುದೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಅವರಿಗಿರುವ ನೋಂದಣಿ ನೋರ್ಕಾ ವೆಬ್‌ಸೈಟ್‌ನಲ್ಲಿ ಬುಧವಾರ ಪ್ರಾರಂಭವಾಗಲಿದೆ.

ಇತರ ರಾಜ್ಯಗಳಲ್ಲಿ ಚಿಕಿತ್ಸೆಗಾಗಿ ಹೋದವರು, ಚಿಕಿತ್ಸೆ ಮುಗಿದವರು,ಉನ್ನತ ಚಿಕಿತ್ಸೆಗಾಗಿ ನೋಂದಣಿ ಮಾಡಿದ ನಂತರ ದಿನಾಂಕ ಮುಂದೂಡಲಾದ ಕಾರಣ ಬಾಕಿಯಾದ ಇತರ ರಾಜ್ಯದ ನಿವಾಸಿಗಳು,ವಿದ್ಯಾಭ್ಯಾಸಕ್ಕಾಗಿ ಇತರ ರಾಜ್ಯಗಳಿಗೆ ಹೋದವರು,ಇತರ ರಾಜ್ಯಗಳಿಂದ ಅಧ್ಯಯನ ಮುಗಿದ ನಂತರ ಹಿಂದಿರುಗಲಾಗದವರು, ಪರೀಕ್ಷೆಗಳು, ಸಂದರ್ಶನಗಳು ಮುಂತಾದವುಗಳಿಗೆ ಹೋದವರು ತೀರ್ಥಯಾತ್ರೆ, ಪ್ರವಾಸೋದ್ಯಮ, ಬಂಧುಗಳಲ್ಲಿಗೆ ಹೋದವರು, ಮುಚ್ಚಿದ ಶೈಕ್ಷಣಿಕ ಸಂಸ್ಥೆಗಳ ಮಲಯಾಳಿ ವಿದ್ಯಾರ್ಥಿಗಳು,ಉದ್ಯೋಗ ನಷ್ಟ ಹೊಂದಿದವರು, ನಿವೃತ್ತಿ ಹೊಂದಿದವರು,ಕೃಷಿಗಳಿಗಾಗಿ ಇತರ ರಾಜ್ಯಗಳಿಗೆ ಹೋದವರಿಗೆ ಹಿಂದಿರುಗಲು ಮೊದಲ ಆದ್ಯತೆ.ಇವರನ್ನು ಹಂತ ಹಂತವಾಗಿ ತರಲಾಗುವುದು.ಇದಕ್ಕಾಗಿ ಯೋಜನೆ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಆರೋಗ್ಯ ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳೊಂದಿಗೆ ಅವರನ್ನು ಮರಳಿ ತರಲಾಗುವುದು. ಯಾವೆಲ್ಲಾ ದಾರಿಗಳಿಂದ ಕರೆತರಬಹುದು ಎಂಬುದರ ವ್ಯವಸ್ಥೆ ಮಾಡಲಾಗುವುದು. ಅವರಿಗೆ ಗಡಿಯಲ್ಲಿ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಹಿಂದಿರುಗಿದ ಪ್ರತಿಯೊಬ್ಬರೂ ಕ್ಯಾರೆಂಟೈನ್‌ಗೆ ಹೋಗಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ವಿದೇಶದಿಂದ ಹಿಂದಿರುಗುವ ಪ್ರವಾಸಿಗಳನ್ನು ಪರಿಶೀಲಿಸಲು ವಿಮಾನ ಕೇಂದ್ರಿತ ವ್ಯವಸ್ಥೆ ಜಾರಿಯಲ್ಲಿರುತ್ತದೆ. 2,02,000 ವಿದೇಶಿ ಮಲಯಾಳಿಗಳು ಹಿಂದಿರುಗಲು ನಾರ್ಕಾದ ವೆಬ್‌ಸೈಟ್‌ನಲ್ಲಿ ನೋಂದಾಯಿಸಲಾಗಿದೆ.

NO COMMENTS